ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳಿಂದ ಮನವಿ.
ಬೆಳಗಾವಿ: ಬೆಳಗಾವಿಯಲ್ಲಿ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಾದ ಮಹಾದೇವ ತಳವಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯ ನವರಿಗೆ ಕನ್ನಡ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಹಾದೇವ ತಳವಾರ ಕಿತ್ತೂರು ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡಿ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದರು.
1] ಬೆಳಗಾವಿಯ ಕನ್ನಡ ರಾಜ್ಯೋತ್ಸವ-2025ಕ್ಕೆ ಸರ್ಕಾರದಿಂದ ರೂ. 2.00ಕೋಟಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.
2] ಕಿತ್ತೂರು ಕರ್ನಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ ವಿಶೇಷ ಅನುದಾನ ಒದಗಿಸುವುದು.
3] ವಾಯವ್ಯ ಸಾರಿಗೆ ಸಂಸ್ಥೆಯ ಹೆಸರನ್ನು ಕಿತ್ತೂರಯ ಕರ್ನಾಟಕ ಸಾರಿಗೆ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಬೇಕು.
4) ಕಿತ್ತೂರು ಕರ್ನಾಟಕ ಭಾಗದಲ್ಲಿರುವ ಐಟಿ/ಬಿಟಿ ಮತ್ತು ಜವಳಿ ಪಾರ್ಕಗಳನ್ನು ನಿರ್ಮಿಸಿ ವಿಶೇಷ ಅನುದಾನ ನೀಡಿ ಕಾರ್ಯಗತಗೊಳಿಸಬೇಕು.
5] ಸುವರ್ಣ ವಿಧನ ಸೌಧಕ್ಕೆ ವಿಭಾಗೀಯ ಕಛೇರಿಗಳನ್ನು ಸ್ಥಳಾಂತರಗೊಳಿಸಿ ಈ ಭಾಗದ ಜನ ಸಾಮಾನ್ಯರು ಬೆಂಗಳೂರು ಅಲೆದಾಡುವುದನ್ನು ತಪ್ಪಿಸಬೇಕು.
6] ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ ಬೆಳವಡಿ ಮಲ್ಲಮ್ಮ. ಅಮಟೂರು ಬಾಳಪ್ಪ ಮತ್ತು ಸಿಂಧೂರ ಲಕ್ಷ್ಮಣರವರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಬೇಕು.
7] ಕೃಷ್ಣಾ ಮತ್ತು ಮಹಾದಾಯಿ ನದಿಗಳಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಅನುದಾನ ಒದಗಿಸಿ ಯೋಜನೆಗಳನ್ನು ಪೂರ್ಣಗೊಳಿಸುವುದು.
8] ಕರ್ನಾಟಕ ಲಾಂಛನದಲ್ಲಿರುವ “ಸತ್ಯಮೇವ ಜಯತೆ” ವಾಕ್ಯವನ್ನು ಹಿಂದಿಯಿಂದ ಕನ್ನಡಕ್ಕೆ ಬದಲಾಯಿಸಬೇಕು.
9] ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಿತ್ತೂರು ಕರ್ನಾಟಕ ಭಾಗದ ಪ್ರತಿಯೊಂದು ತಾಲೂಕಿನಲ್ಲೂ ಐಟಿಐ, ಡಿಪ್ಲೋಮಾ ಪದವಿ ಮತತು ಕಾನೂನು ಕಾಲೇಜುಗಳನ್ನು ಪ್ರಾರಂಭಿಸಲು ಸೂಕ್ತ ಕ್ರಮಕೈಗೊಳ್ಳುವುದು.
10] ಸಾರಿಗೆ ಸಂಸ್ಥೆಯ ಬಸ್ಸುಗಳ ಓಡಾಟ ಕಡಿಮೆಯಾಗಿರುವುದರಿಂದ ಬಡ ವಿದ್ಯಾರ್ಥಿಗಳ ಬಹುಪಾಲ ಸಮಯ ಬಸ್ಸುಗಳ ಕಾಯುವಿಕೆಯಲ್ಲಿ ವ್ಯರ್ಥವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೊದಲಿನ ರೀತಿಯಲ್ಲಿಯೇ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಕ್ರಮ ಜರುಗಿಸಬೇಕು.
11] ಬೆಂಗಳೂರು ನಗರ ಮಾದರಿಯಲ್ಲಿಯೇ ಬೆಳಗಾವಿ ನಗರ ಮತ್ತು ಬೆಳಗಾವಿಯಿಂದ ಧಾರವಾಡ-ಹುಬ್ಬಳ್ಳಿವರೆಗೆ ಮೆಟ್ರೋ ಟ್ರೇನ ಪ್ರಾರಂಭಿಸಲು ಯೋಜನೆಗಳನ್ನು ರೂಪಿಸಬೇಕು.
12] ಬೆಳಗಾವಿ ನಗರದ ಸಂಚಾರ ದಟ್ಟನೆಯನ್ನು ಕಡಿತಗೊಳಿಸಲು ಮತತು ಭಾರಿ ವಾಹನಗಳ ಸಂಚಾರ ನಿಯಂತ್ರಿಸಲು ವರ್ತುಲ ರಸ್ತೆ (ರಿಂಗ್ ರೋಡ) ಮೇಲ್ಲೇತುವೆ ರಸ್ತೆಗಳನ್ನು ನಿರ್ಮಿಸಲು ಸೂಕ್ತ ಕ್ರಮ ಜರುಗಿಸಬೇಕು. ಎಂಬ ಆಗ್ರಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಗೌರವಾಧ್ಯಕ್ಷೆ ಕಸ್ತೂರಿ ಭಾವಿ,ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ, ರಾಜ್ಯ ಪ್ರಧಾನ ಸಂಚಾಲಕ ದೇವೇಂದ್ರ ತಳವಾರ, ಜಿಲ್ಲಾ ಉಪಾಧ್ಯಕ್ಷ ಸಂತೋಷ ತಳ್ಳಿಮನಿ, ಭರಮಣ್ಣ ಬಡಸ ಆಟೋ ಘಟಕದ ಅಧ್ಯಕ್ಷ ವಾಸು ಬಸನಾಯ್ಕರ ಇತರರು ಉಪಸ್ಥಿತರಿದ್ದರು.

